ಭಾನುವಾರ, ಜೂನ್ 5, 2011

ಬುಧವಾರ, ಮಾರ್ಚ್ 9, 2011

ಕುವೈತ್  ರಾಷ್ಟ್ರ ದ  ೫೦ನೇ ಸ್ವತಂತ್ರ  ದಿನದ ಆಚರಣೆ ಯಾ  ಒಂದು ಕಿರು ನೋಟ
ಬೆಳಕಿನ ಆಟ ಹಾಗು ಸಿಡಿಮದ್ದು ಪ್ರದರ್ಶನ.

ಭಾನುವಾರ, ಫೆಬ್ರವರಿ 20, 2011

ಪಂಡರಪುರ ಶ್ರೀ ಕ್ಷೇತ್ರ ಉಸುಕಿನ ಅರಮನೆಯಲಿ

ಪಂಡರಪುರ ಶ್ರೀ ಕ್ಷೇತ್ರ ಉಸುಕಿನ ಅರಮನೆಯಲಿ, ಕಾರ್ಯಕ್ರಮದ ಒಂದು ಪಕ್ಷಿನೋಟ ನಿಮಗಾಗಿ.



ಗುರುವಾರ, ಆಗಸ್ಟ್ 27, 2009

ಮಾನವತೆಯ ನವ ಯುಗ - ದಿ ಸಿಕ್ರೆಟ್ " ( The Secret) ರಹಸ್ಯ

What Is The Secret

ಮಾನವತೆಯ ನವ ಯುಗ - ದಿ ಸಿಕ್ರೆಟ್ " ( The Secret) ರಹಸ್ಯ
ರಹಸ್ಯ - ಈ ಜಗತ್ಹಿನ ಅತಿ ಮುಖ್ಯವಾದ ಹಾಗು ತುಂಬ ಶಕ್ತಿಶಾಲಿಯಾದ ನಿಯಮಗಳ ರಹಸ್ಯವನ್ನ ಬಿಚ್ಹಿಡುತಾ ಸಾಗುತದೆ.
ಬಂಗಾರದ ಎಳೇಯಂತೆ ಈ ಜಗತ್ಹಿನ ನಿಯಮದ ಜ್ಞಾನ, ಇದು ಎಲ್ಲ ಸ್ವಾಮಿಗಳ , ಶ್ರೀಗಳ, ಪ್ರವಾದಿಗಳ ಜೀವನ ಹಾಗು ಅವರ ಪ್ರವಚನದಲ್ಲಿ, ಜಗತ್ಹಿನ ಇತಿಹಾಸ ದ ಮೂಲಕ ಜಗತ್ಹಿನ ಮುಖ್ಯವಾದ ವ್ಯಕ್ತಿ ಗಳ ಬದುಕಿನ ಜೊತೆ ಸಾಗುತದೆ. ಆ ಎಲ್ಲ ಮಹಾನ್ ವ್ಯಕ್ತಿಗಳು ಏರಿದ ಎತ್ತರ ಅವರು ಪೂರ್ಣಗೊಳಿಸಿದ, ಹಾಗು ಜಗತ್ಹಿಗೆ ಅವರು ಕೊಟ್ಟ ಕೊಡುಗೆ ಎಲ್ಲವು ಕೂಡ ಈ ನಿಯಮದ ಪ್ರಕಾರವೇ ನಡೆದಿದೆ .
ಯಾರನ್ನು ಹೊರತುಪಡಿಸದೆ ಪ್ರತಿಯೊಬ್ಬ ಮನುಷ್ಯ ತನ್ನ ದೌರ್ಬಲ್ಯ ಹಾಗು ಕಷ್ಟ ಕಾರ್ಪಣ್ಯಗಳನ್ನೂ ಕೂಡ ತನ್ನ ಶಕ್ತಿಯಾಗಿ, ತನ್ನ ಬಲವಾಗಿ, ಆರೋಗ್ಯ ಹಾಗು ನೆಮ್ಮದಿಯನ್ನು ಹೆಚ್ಹಾಗಿ ಪಡೆಯಬಹದು.
ರಹಸ್ಯದ ಬಗ್ಗೆ ಸತ್ಯದ ಮೊದಲ ಕಿರಣ ಗೋಚರಿಸಿದ್ದು ನೂರು ವರ್ಷಗಳ ಹಳೆಯ ಪುಸ್ತಕ ಒಂದರಲ್ಲಿ. ಇದರ ಬೆನ್ನು ಹತ್ತಿ ಹೊರಟವರು ಕಂಡದು ಶತಮಾನಗಳಷ್ಟು ಹಳೆಯದಾದ ತತ್ವಶಾಸ್ತ್ರ , ಮಹಾನ್ ವ್ಯಕ್ತಿಗಳ ಪ್ರವಚನ, ಬರಹ ಹಾಗು ಜಗತಿನ ಎಲ್ಲ ದರ್ಮಗಳ ಗರ್ಭದಲ್ಲಿ ಅಡಗಿದ್ದ ಸಾಮಾನ್ಯ ಸತ್ಯ ದ ಸುಳಿಹು.
ರೊಂಡ ಬಯ್ರ್ನಿ ಹುಡುಕಿದ ಈ ಸತ್ಯ ದ ಸುಳಿಹುಗಳು ದಿ ಸಿಕ್ರೆಟ್ ಎಂಬ ಪುಸ್ತಕ ಹಾಗು ಚಲನ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಈ ಚಿತ್ರವನ್ನ ಲಕ್ಷಾಂತರ ಮಂದಿ ಜಗತಿನದ್ಯಂತ ನೋಡಿದ್ದಾರೆ ಹಾಗು ಪುಸ್ತಕ ವನ್ನ ಓದಿದ್ದಾರೆ.
ದಿ ಸಿಕ್ರೆಟ್ ( ರಹಸ್ಯ ) ಭುವಿಯ ಮೇಲಿನ ಎಲ್ಲ ಜೀವಿಗಳನ್ನ ನಿಯ೦ತ್ರಿಸುತ್ಹಿರುವ ನಿಸರ್ಗದ ನಿಯಮದ ಬಗ್ಗೆ ಇರುವ ರಹಸ್ಯವನ್ನ ಬಯಲು ಮಾಡುತ ಸಾಗುತದೆ. ಈ ನಿಯಮದ ಜ್ಞಾನವನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ಕೂಡ ನಿಮ್ಮ ಜೀವನದ ಎಲ್ಲ ರಂಗಗಳಲಿ ಕೂಡ ಬದಲಾವಣೆಗಳನ್ನ ಪಡೆಯಬಹುದು.
ಇದು ಸಮೃದ್ಧಿ, ಸಂತಸ, ಆರೋಗ್ಯ ಸಂಬಂದ ಗಳ ರಹಸ್ಯ, ಇದು ಜೀವನದ ಅತಿ ಮುಖ್ಯ ರಹಸ್ಯ.
ತಮಗಾಗಿ ಈ ಚಿತ್ರದ ತುಣುಕು ಇಲ್ಲಿದೆ, ತಮಗೆ ಇಷ್ಟವಾದರೆ ಪೂರ್ಣ ಚಿತ್ರ ನೋಡಿ, ಪುಸ್ತಕ ಓದಿ. (ಕೆಳಗಿನ ಪದ ಕ್ಲಿಕಿಸಿ)
ದಿ ಸಿಕ್ರೆಟ್ -ಚಿತ್ರ





ನಿಮ್ಮ ಜೀವನದ ರಹಸ್ಯ ನಿಮಗೆ ಗೊತ್ಹಾಗಬಹುದು.
ಆಕರ್ಷಣೆ ಜೀವನದ ಅತಿ ಮುಖ್ಯವಾದ ನಿಯಮ ಹಾಗು ರಹಸ್ಯ .

ಮಂಗಳವಾರ, ಆಗಸ್ಟ್ 25, 2009

ದೂರದರ್ಶಕ ಕ್ಕೆ ನಾಲ್ಕು ನೂರು ವರ್ಷ





ಇಂದಿಗೆ ಸರಿಯಾಗಿ ನಾಲ್ಕು ನೂರು ವರ್ಷಗಳ ಹಿಂದೆ, ೧೬೦೯ ಆಗಸ್ಟ್ ೨೫ ರಂದು ಇಟಲಿಯ ಒಬ್ಬ ಖಗೋಳ ವಿಜ್ಞಾನಿ ತಾನು ತಯಾರಿಸಿದ ವಸ್ತು ಒಂದರ ಮೂಲಕ ಕೆಲವು ವರ್ತಕರಿಗೆ ಹಿಂದೆಂದು ಯಾರು ನೋಡದ ಹಾಗು ಅಧ್ಯಯನ ಮಾಡದ ಆಕಾಶದ ವಸ್ತುಗಳನ್ನು ತೋರಿಸಿದ್ದ.

ಬಹುಶ ಈಗಾಗಲೇ ನಿಮಗೆ ಅರ್ಥ ಆಗಿರಬೇಕು ನಾನು ಯಾವುದರ ಬಗ್ಗೆ ಮಾತನಾಡುತಿದೇನೆ ಎಂದು . ನಿಜ ನಾನು ಹೇಳುತಿರುವುದು ದೂರ ದರ್ಶಕ ಹಾಗೂ ಅದನ್ನು ನಿರ್ಮಿಸಿದ ಇಟಲಿಯ ಖಗೋಳ ಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ .

ದೂರ ದರ್ಶಕದ ನಿರ್ಮಾಣ, ಪ್ರಪಂಚದಲ್ಲಿ ಮುಖ್ಯ ಬದಲಾವಣೆ ಗೆ ಕಾರಣವಾಯ್ತು, ಇದು ವಿಜ್ಞಾನ, ತತ್ವ ಶಸ್ತ್ರ ಸಮಾಜ ದರ್ಮ ಇತಿಹಾಸ ,ಎಲ್ಲದರ ತಳಹದಿಯನ್ನ ಪ್ರಶ್ನಿಸಿ ಅವುಗಳ ಮುಖಗಳನ್ನು ಬದಲಿಸಿದ ಕೀರ್ತಿ ದೂರ ದರ್ಶಕ ಹಾಗು ಗೆಲಿಲಿಯೋ ಗೆ ಸಲ್ಲಬೇಕು.
ದೂರ ದರ್ಶಕ , ಆಕಾಶಕಾಯ ಗಳು, ಸ್ವರ್ಗಲೋಕ ಇವುಗಳ ಬಗ್ಗೆ ತುಂಬ ಮುಖ್ಯವಾದ ವಿಷಯಗಳನ್ನ ಬಹಿರಂಗಪಡಿಸಿತು ಹಾಗೆ ಭೂಮಿ ಕೇಂದ್ರ ಸಿದ್ದಾಂತ ಪ್ರತಿಪಾದಿಸಿದ ಸಂಪ್ರದಾಯ ವಾದಿಗಳು ಹಾಗು ಕೊಪೆರ್ನಿಕಾಸ್ ನ ಸೂರ್ಯ ಕೇಂದ್ರ ಸಿದ್ದಾಂತವನ್ನು ಒಪ್ಪಿದ ಜನರ ನಡುವೆ ವಾದ ವಿವಾದಕ್ಕೆ ಕಾರಣವಾಯ್ತು. ಸಾಮಾನ್ಯ ಮನುಷ್ಯ ಕೂಡ ಆಕಾಶ ಕಾಯ ಗಳನ್ನೂ ನೋಡಬಹುದು ಎಂದು ಮನವರಿಕೆಯಾಯಿತು ಇದನ್ನು ಮಹಾನ್ ತತ್ವ ಜ್ಞಾನಿ ಅರಿಸ್ಟಾಟಲ್ ಕೂಡ ಕನಸು ಕಂಡಿರಲ್ಲಿಲ್ಲ .

ನಿಸರ್ಗಅದ್ಯಯನ ಜ್ಞಾನ ದ ಜೊತೆಗೆ ಉಪಕರಣಗಳ ಉಪಯೋಗಕ್ಕೆ ನಾಂದಿಹಾಡಿತು , ವಿಜ್ಞಾನದ ಈ ಅದ್ಬುತ ಕೊಡಿಗೆ ಯಾ ನಾನೂರು ವರ್ಷಗಳ ವರ್ಷಾಚರಣೆ ಅಂಗವಾಗಿ ೨೦೦೯ ನೆ ವರ್ಷ ಅಂತರ ರಾಷ್ಟ್ರೀಯ ಖಗೋಳ ವರ್ಷವಾಗಿ ಆಚರಿಸಲಾಗುತಿದೆ.ಇದರ ನೆನಪಿಗಾಗಿ ಈ ಸಣ್ಣ ಬರಹ





ಭಾನುವಾರ, ಆಗಸ್ಟ್ 16, 2009

ಅಮ್ಮ

ಅವಳ ಮುತ್ಹು ಮತ್ಹೆರಿಸಿ
ತಂದಿತೆ ಕುತ್ಹು
ಹೆತ್ಹುಹೊತ್ಹು ಸಾಕಿದ
ಜನನಿ ಗೆ ಕೊಡುವೆಏನು
ಮ್ರುತ್ಹು
ಎಚ್ಹರ ಗೆಳಯ
ಕಳೆದು ಹೋದರೆ
ಸಿಗಲಾರದ
ಮುತ್ಹು - ಅಮ್ಮ