ಮಂಗಳವಾರ, ಆಗಸ್ಟ್ 25, 2009

ದೂರದರ್ಶಕ ಕ್ಕೆ ನಾಲ್ಕು ನೂರು ವರ್ಷ





ಇಂದಿಗೆ ಸರಿಯಾಗಿ ನಾಲ್ಕು ನೂರು ವರ್ಷಗಳ ಹಿಂದೆ, ೧೬೦೯ ಆಗಸ್ಟ್ ೨೫ ರಂದು ಇಟಲಿಯ ಒಬ್ಬ ಖಗೋಳ ವಿಜ್ಞಾನಿ ತಾನು ತಯಾರಿಸಿದ ವಸ್ತು ಒಂದರ ಮೂಲಕ ಕೆಲವು ವರ್ತಕರಿಗೆ ಹಿಂದೆಂದು ಯಾರು ನೋಡದ ಹಾಗು ಅಧ್ಯಯನ ಮಾಡದ ಆಕಾಶದ ವಸ್ತುಗಳನ್ನು ತೋರಿಸಿದ್ದ.

ಬಹುಶ ಈಗಾಗಲೇ ನಿಮಗೆ ಅರ್ಥ ಆಗಿರಬೇಕು ನಾನು ಯಾವುದರ ಬಗ್ಗೆ ಮಾತನಾಡುತಿದೇನೆ ಎಂದು . ನಿಜ ನಾನು ಹೇಳುತಿರುವುದು ದೂರ ದರ್ಶಕ ಹಾಗೂ ಅದನ್ನು ನಿರ್ಮಿಸಿದ ಇಟಲಿಯ ಖಗೋಳ ಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ .

ದೂರ ದರ್ಶಕದ ನಿರ್ಮಾಣ, ಪ್ರಪಂಚದಲ್ಲಿ ಮುಖ್ಯ ಬದಲಾವಣೆ ಗೆ ಕಾರಣವಾಯ್ತು, ಇದು ವಿಜ್ಞಾನ, ತತ್ವ ಶಸ್ತ್ರ ಸಮಾಜ ದರ್ಮ ಇತಿಹಾಸ ,ಎಲ್ಲದರ ತಳಹದಿಯನ್ನ ಪ್ರಶ್ನಿಸಿ ಅವುಗಳ ಮುಖಗಳನ್ನು ಬದಲಿಸಿದ ಕೀರ್ತಿ ದೂರ ದರ್ಶಕ ಹಾಗು ಗೆಲಿಲಿಯೋ ಗೆ ಸಲ್ಲಬೇಕು.
ದೂರ ದರ್ಶಕ , ಆಕಾಶಕಾಯ ಗಳು, ಸ್ವರ್ಗಲೋಕ ಇವುಗಳ ಬಗ್ಗೆ ತುಂಬ ಮುಖ್ಯವಾದ ವಿಷಯಗಳನ್ನ ಬಹಿರಂಗಪಡಿಸಿತು ಹಾಗೆ ಭೂಮಿ ಕೇಂದ್ರ ಸಿದ್ದಾಂತ ಪ್ರತಿಪಾದಿಸಿದ ಸಂಪ್ರದಾಯ ವಾದಿಗಳು ಹಾಗು ಕೊಪೆರ್ನಿಕಾಸ್ ನ ಸೂರ್ಯ ಕೇಂದ್ರ ಸಿದ್ದಾಂತವನ್ನು ಒಪ್ಪಿದ ಜನರ ನಡುವೆ ವಾದ ವಿವಾದಕ್ಕೆ ಕಾರಣವಾಯ್ತು. ಸಾಮಾನ್ಯ ಮನುಷ್ಯ ಕೂಡ ಆಕಾಶ ಕಾಯ ಗಳನ್ನೂ ನೋಡಬಹುದು ಎಂದು ಮನವರಿಕೆಯಾಯಿತು ಇದನ್ನು ಮಹಾನ್ ತತ್ವ ಜ್ಞಾನಿ ಅರಿಸ್ಟಾಟಲ್ ಕೂಡ ಕನಸು ಕಂಡಿರಲ್ಲಿಲ್ಲ .

ನಿಸರ್ಗಅದ್ಯಯನ ಜ್ಞಾನ ದ ಜೊತೆಗೆ ಉಪಕರಣಗಳ ಉಪಯೋಗಕ್ಕೆ ನಾಂದಿಹಾಡಿತು , ವಿಜ್ಞಾನದ ಈ ಅದ್ಬುತ ಕೊಡಿಗೆ ಯಾ ನಾನೂರು ವರ್ಷಗಳ ವರ್ಷಾಚರಣೆ ಅಂಗವಾಗಿ ೨೦೦೯ ನೆ ವರ್ಷ ಅಂತರ ರಾಷ್ಟ್ರೀಯ ಖಗೋಳ ವರ್ಷವಾಗಿ ಆಚರಿಸಲಾಗುತಿದೆ.ಇದರ ನೆನಪಿಗಾಗಿ ಈ ಸಣ್ಣ ಬರಹ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ